Saturday 25 June 2011

ಚಿತ್ತಿನ ಚಂದ್ರ

ಚಂದ್ರನ ಚಿತ್ತಾರ
ಕಂದಮ್ಮಗಳ ಮೊದಲ ಬರಹದಲಿ
ಅರಳುವ ಮುದ್ದಾದ ದುಂಡಗಿನ ಚಿತ್ತು,
ನರೆ-ತಿಳಿದರಿಗೆ ಕಾಣುವುದಿನಿತೆ....,
ಭೂರಮೆಗೆ ನಿರತ ಚಂದಿರನ ಸುತ್ತು.,



ಸೂರ್ಯ ವೃತ್ತಾಂತ

ಮುಡಿಯಲ್ಲಿ ನಗುನಗುತ,
ನಡುವೊಳಗೆ ತಾ ಸುಟ್ಟು,
ಅಡಿ ಸರಿದ ನಿಶೆಯೇರಿ,
ಎಡೆಬಿಡದೆ ನಡೆವ ಸೂರ್ಯ ವೃತ್ತಾಂತ.

Thursday 23 June 2011

ಬೆದರು-ಬೊಂಬೆ

ಸೊಂಟದ ಮೇಲೆ ಕೈ,
ಗಂಭೀರ ನಿಲುವಿನ ಮೈ,
ಬಣ್ಣದ ಆಯುಧ ಕೈಯೊಳಗೆ ಇತ್ತು,
ಬೆದರುಬೊಂಬೆಗೇಕೆ ಈ ಪರಿಯ ಗತ್ತು..?

ಕುಂಚದಲ್ಲಿ-ವೇಗದೂತ

ವಾಯುವೇಗದ ಪ್ರಹಾರ
ಮಿಂಚಿನ ಓಟ,
ವಿಚಿತ್ರವಾದ ಆಕಾರ,
ಕುಂಚದ ಆಟ.

Monday 13 June 2011

ನಿರ್ದೇಶಕರ ಮಾತು...!



ರಂಗದ ಮೇಲಿನ ಮನೆಗೆ
ರಂಗವಲ್ಲಿ ಯಾಕೆ?
ಬೆಳಕು ಆರುವವರೆಗೆ
ತೆಗೆಯದಿರಿ ಜೋಕೆ...!!!



ರವಿ ಕಾಣದ್ದು...!


ಬಿರು ಬಿಸಿಲೆಂದು,
ಮರದೆಡೆ ಅವಿತು
ನೆರಳ ಸವಿಯುವೆನೆಂದರೆ....
ಮರೆಯಿಂದ ಇಣುಕಿ ತನ್ನಿರುವ
ತೋರುತಿಹ ರವಿರಾಜ...!!!


Sunday 5 June 2011

ಅಬ್ಬಾ ............ಹುತ್ತಗಳ ರಾಜ





ನನ್ನ ಆಫೀಸಿನ ಕೆಲಸದನಿಮಿತ್ತ ಒಮ್ಮೆ ಉತ್ತರಕನ್ನಡ ಜಿಲ್ಲೆಯ ಸಿರಸಿಗೆ ಭೇಟಿ ನೀಡಿದ್ದೆ.ಹಚ್ಚ ಹಸಿರು ಹಾಸಿನ ದಟ್ಟ ಕಾಡಿನ ಹಾದಿಯಾಗಿ ಸಾಗಿತ್ತು ನನ್ನ ಪಯಣ.ಪ್ರಾಕೃತಿಕ ಸೌಂದರ್ಯ ಸವಿಯುತ್ತಾ ಪಯಣ ಸಾಗಿರಲು ದಾರಿಯುದ್ದಕ್ಕೂ ಮರಗಳ ಸಂದಿನಿಂದ ಆಳೆತ್ತರದ ಮಣ್ಣಿನರಾಶಿ ಕಂಡು ನನ್ನ ನೋಟವನ್ನು ಅತ್ತ ತಿರುಗಿಸಿತು....ಏನಾಶ್ಚರ್ಯ ಆಳೆತ್ತರದ ಹುತ್ತಗಳು.....ಭೂತಾಯಿಯ ಹಸಿರಿನ ಮಡಿಲಿನ ಮದ್ಯೆ ಈ ಮಣ್ಣ ಮುದ್ದೆಗಳು ಅತ್ಯದ್ಭುತವಾಗಿ ಕಂಡವು....ದೇವರೇ ನನಗೆ ಈ ಯೋಗಭಾಗ್ಯ ಕರುಣಿಸಿದ ನಿನಗೆ ಶರಣು.